ಗೋಧೂಳಿ ಸಮಯದಲ್ಲಿ, ಹಸುಗಳ ಗೆಜ್ಜೆ ನಾದದಲ್ಲಿ, ಹಕ್ಕಿಗಳ ಚಿಲಿಪಿಲಿಯಲ್ಲಿ, ಸುಮಗಳ ನಗುವಿನಲ್ಲಿ,

ತುಂಬು ರವಿಯ ವಿದಾಯದಲ್ಲಿ, ಆಗಸದಿ ಶಶಿಯ ನಿರೀಕ್ಷೆಯಲ್ಲಿ, ದೂರದಿ ದೇವಾಲಯದ  ಗಂಟೆ ನಾದದಲ್ಲಿ,

ಕುಳಿತಾಗ ನಾ ಪ್ರಕೃತಿಯ ಮಡಿಲಲ್ಲಿ, ಸಂತೈಸುತ್ತದೆ ತಂಗಾಳಿ ಪ್ರೀತಿಯಲ್ಲಿ, ಖುಷಿಯಾಗಿರು ಬದುಕಿನಲ್ಲಿ,

ಮುಗಿಸು ಜೀವನ ಗೆಲುವುವಿನಲ್ಲಿ….

-ಕಲ್ಪ ಸಿ. ಎನ್.