ಮನದ ಬೋಗುಣಿಯ ಅದ್ದಿದ ಕುಂಚದ ಬಣ್ಣ…
ಕಣ್ಮುಚ್ಚಿದ ಕತ್ತಲಿನ್ನಲ್ಲೂ ಮಿಂಚಿನಾಟವಾಡುವ ಬಣ್ಣ…
ಬದುಕಿನ ಪ್ರತಿ ತಿರುವಿನಲ್ಲಿ ಬರುವ ನಾನಾ ಬಣ್ಣ…
ಹೂವಿನ ಲೋಕದೊಳಗೆ ಕನ್ಸಳ್ಳೆಯುವ ಬಣ್ಣ...
ಗಂಭೀರತೆಯ ಸಾರುವ ಪ್ರಾಣಿಗಳ ಘಾಡ ಬಣ್ಣ….
ಈ ಭುವಿಯ ಎಲ್ಲದರಲ್ಲೂ ತುಂಬಿರುವ ಬಣ್ಣ…
ಎಷ್ಟು ಸುಂದರ ಈ ಲೋಕ ನೀ ನೋಡ ಅರಳಿಸಿ ಕಣ್ಣ…
ತುಂಬಿ ನಿಮ್ಮ ಬದುಕಿಗೆ ಸಾರ್ಥಕತೆಯ ಬಣ್ಣ…
ಕಲ್ಪ. ಸಿ.ಎನ್.