ನೀನೂಬ್ಬ ಮಹಾನ್ ಆಟಗಾರ..
ದೇಶದ ಕೀರ್ತಿ ಪತಾಕೆಯ ಹಾರಿಸಿದೆ ಎತ್ತರ..
ನಿನ್ನ ಕಂಗಳಲ್ಲಿ ಏನೋ ಹೂಳಪು…
ಮೈದಾನದ ತುಂಬಾ ನೀನಟ್ಟಿದ ಚಂಡಿನದೆ ಛಳಕು…
ಹೇಗೆ ವರ್ಣಿಸಲಿ ನಿನ್ನಾಟವ…
ಕದಲಿಸಲಾರರು ನಿನ್ನಿಂದ ಕಣ್ಣೋಟವ…
ಸಕಲ ಐಶ್ವರ್ಯ ತುಂಬಿವೆ ನಿನ್ನಲ್ಲಿ…
ಆದರೂ ಮಾನವೀಯತೆಯ ಛಳಕು ನಿನ್ನ ಕಣ್ಣಲ್ಲಿ…
ದೇಶಕ್ಕಾಗಿ ಮುಡಿಪು ಈ ಆಟ ಎಂಬ ತೃಪ್ತಿ ಮನದಲ್ಲಿ…
ಹೇಗೆ ವಂದಿಸಲಿ ಈ ಪುಟ್ಟ ಮೂರ್ತಿಯ ಕೀರ್ತಿಗೆ…
ಬೆಳಗುತ್ತಿರಲಿ ಸದಾ ನಿನ್ನ ಪ್ರಕಾಶ ವಿಶ್ವದಲ್ಲಿ…
ಮೂಡಿಸುತಿರು ಮಂದಹಾಸ ಎಲ್ಲರ ಮೊಗದಲ್ಲಿ...
ನಿನ್ನಾಟದ ರಂಗಿನಿಂದ ಭಾರತದಲ್ಲಿ ಸದಾ ದೀಪಾವಳಿ…
ತುಂಬಿರುವೆ ಎಲ್ಲರ ಮನ ಬಣ್ಣದ ರಂಗೋಲಿಯಲ್ಲಿ…
ನಗು ನಗುತ್ತಾ ನೀ ಇರು ನೂರು ಕಾಲ ನಮ್ಮೆಲ್ಲರ ಜೂತೆಯಲ್ಲಿ…
ಓ ಮಹಾನ್ ಚೇತನ…
ನಿನಗಿದೋ ನನ್ನ ಸಾವಿರ ಸಾವಿರ ನಮನ…
-ಕಲ್ಪ. ಸಿ.ಎನ್.