ಬಣ್ಣ

ಮನದ ಬೋಗುಣಿಯ ಅದ್ದಿದ ಕುಂಚದ ಬಣ್ಣ…
ಕಣ್ಮುಚ್ಚಿದ ಕತ್ತಲಿನ್ನಲ್ಲೂ ಮಿಂಚಿನಾಟವಾಡುವ ಬಣ್ಣ…
ಬದುಕಿನ ಪ್ರತಿ ತಿರುವಿನಲ್ಲಿ ಬರುವ ನಾನಾ ಬಣ್ಣ…
ಹೂವಿನ ಲೋಕದೊಳಗೆ ಕನ್ಸಳ್ಳೆಯುವ ಬಣ್ಣ..‌.
ಗಂಭೀರತೆಯ ಸಾರುವ ಪ್ರಾಣಿಗಳ ಘಾಡ ಬಣ್ಣ‌‌‌‌….
ಈ ಭುವಿಯ ಎಲ್ಲದರಲ್ಲೂ ತುಂಬಿರುವ ಬಣ್ಣ…
ಎಷ್ಟು ಸುಂದರ ಈ ಲೋಕ ನೀ ನೋಡ ಅರಳಿಸಿ ಕಣ್ಣ…
ತುಂಬಿ ನಿಮ್ಮ ಬದುಕಿಗೆ ಸಾರ್ಥಕತೆಯ ಬಣ್ಣ…
ಕಲ್ಪ. ಸಿ.ಎನ್.

ಸಂಕ್ರಾಂತಿ

ಕಬ್ಬು ಹಿಂಡಿದಷ್ಟೂ ನೀಡುವುದು ಸಿಹಿಯ …
ಎಳ್ಳು ಹುರಿದಷ್ಟೂ ಭೀರುವುದು ಸುವಾಸನೆಯ…
ಇವೆರಡರ ಜೊತೆ ಬೆರೆತ ಕೋಬ್ಬರಿ ಬೆಲ್ಲದ ಸವಿಯ….
ತಿಂದವನೆ ಬಲ್ಲ ಈ ಮಿಶ್ರಣದ ರುಚಿಯ…
ಆಚರಿಸಿ ಖುಷಿಯಿಂದ ಈ ಸಂಕ್ರಾಂತಿಯ….
ನಿಮಗೆ ಸಂಕ್ರಮಣದ ಶುಭಾಶಯ…..
                                     ಕಲ್ಪ. ಸಿ.ಎನ್.

ಮನ ಹೆಮ್ಮೆ ಪಡಿಸುವೆ ನಿನ್ನ ಪುಟ್ಟ ಪುಟ್ಟ ಪ್ರಯತ್ನಗಳಿಂದ…
ಭರವಸೆಯ ಹೆಚ್ಚಿಸುವೆ ಆ ನಿನ್ನ ದೊಡ್ಡ ಮಾತುಗಳಿಂದ….
ಇನಿತು ನೋವಾದರೂ ಸಂತೈಸುವೆ ಆ ಪುಟ್ಟ ಕೈಗಳಿಂದ…
ಮಮತೆಯೇನೆಂದು ತಿಳಿಸಿದೆ ಆ ನಿನ್ನ ಹ್ರೃದಯದಿಂದ…
ಹೀಗೆ ನೀ ನನ್ನ ಜೂತೆಯಿರಲು ಕಂದಾ…
ದೂರಕುವುದು ನನಗೆ ಪರಿಪೂರ್ಣತೆಯ ಆನಂದ….
ಕಲ್ಪ.ಸಿ.ಎನ್.

ಮಳೆರಾಯ

ವರ್ಷಧಾರೆಯ ಝೇಂಕಾರವೇ ಚಂದ….
ಧುಮ್ಮಿಕ್ಕಿ ಹರಿಯುವ ನೀರಿನಾಟವೇ ಅಂದ…
ಮಳೆಯಂತೆ ಭೋರ್ಗರೆಯುವ ಮನದಾಳದ ಭಾವಬಂಧ…
ಅಲೆ ಅಲೆಯಾಗಿ ಪುಟಿದೇಳುವ ಮನಸಿನೊಳಗಣ ಸೌಗಂಧ…
ಬಾ ಬಾ ಮಳೆರಾಯ ರಭಸದಿ ಆ ಮೋಡಗಳ ನಾಡಿಂದ…
ಸಿಂಗರಿಸು ಇಳೆಯ ಹಸಿರು ತಳಿರು ತೋರಣಗಳಿಂದ….
ಕಲ್ಪ. ಸಿ.ಎನ್.

ಆಸೆ

ನನಗೂ ಮಿಂಚುವಾಸೆ…
ಎಲ್ಲರೂಟ್ಟಿಗೆ ಒಂದಾಗುವಾಸೆ…
ಎಲ್ಲರ ಮನ ಸೆಳೆಯುವಾಸೆ…
ಚಂದ್ರನೂಡನೆ ಹೂಳೆಯುವ ರಂಗೋಲಿ ಬಿಡಿಸುವಾಸೆ..
ನಕ್ಷತ್ರಗಳೆ ನನಗೆ ನಿಮ್ಮಂತಾಗುವಾಸೆ….

ಕಲ್ಪ. ಸಿ.ಎನ್.

ಸೇಹ್ನದ ಕಡಲು

ಯಾಕೀ ಪ್ರೀತಿ ನನ್ನ ಮೇಲೆ
ಇಷ್ಟೊಂದು ಪ್ರೀತಿಗೆ ಅರ್ಹಳೇ ನಾ?
ಹೇಗೆ ತೀರಿಸಲಿ ನಿನ್ನ ಋಣಾ ನಾ?
ಗೆಳತಿ ಹೇಗೆ ತೀರಿಸಲಿ?
ನಿನ್ನ ಕಂಗಳಲ್ಲಿ ತೋರುವ ಆ ಕಾಳಜಿಗೆ ತಲೆಬಾಗಲೋ..
ಹಿಡಿದ ಕೈಗಳಲ್ಲಿ, ಇಟ್ಟಾ ಪ್ರತಿ ಹೆಜ್ಜೆಯಲಿ ನೀನಿದ್ದಿಯೆಂಬ
ಭರವಸೆ ಮೂಡಿಸುವ ಆ ನಿನ್ನ ಸ್ಪರ್ಶಕ್ಕೆ ಮೌನಿಯಾಗಲೋ…
ಹೇಳು ಗೆಳತಿ ಹೇಗೆ ತೀರಿಸಲಿ ನಿನ್ನ ಋಣಾ ನಾ?
ಮಡಿಲಲ್ಲಿ ಮಲಗಿಸಿ ಪ್ರೀತಿಯ ಧಾರೆಯೆರೆಯುವ
ಆ ನಿನ್ನ ಹೃದಯಕ್ಕೆ ಅಭಾರಿಯಾಗಲೋ….
ಪ್ರಕೃತಿಯ ಸವಿ ಸಾಂಗತ್ಯ ಅರಿಯುವ ಬಗೆ ತಿಳಿಸಿದ
ನಿನ್ನ ನವ ಚೈತನ್ಯಕ್ಕೆ ಮರುಳಾಗಲೋ….
ತಿಳಿಯುತಿಲ್ಲಾ ಗೆಳತಿ,
ನನ್ನ ಭಾವನೆಗಳಿಗೆ ಸ್ಪಂದಿಸಿ…
ತಿಳಿ ಮಾಡುತ್ತಿರುವೆ ಮನ, ನಿನ್ನ ಮುಗ್ದ ನಗು ಸೂಸಿ…
ಇದ್ದಿದ್ದರೆ ಗೆಳೆತನದ ಸ್ಪರ್ಧೆ, ನಾವೇ ಅಗ್ರಮಾನ್ಯರು
ಎನ್ನುವ ನಿನ್ನ ದೃಢ ವಿಶ್ವಾಸಕ್ಕೆ ಸಾಕ್ಷಿಯಾಗಲೋ…
ತಿಳಿಯುತ್ತಿಲ್ಲ ಗೆಳತಿ ಹೇಗೆ ತೀರಿಸಲಿ ನಿನ್ನ ಋಣಾ ನಾ?

ಕಲ್ಪ. ಸಿ.ಎನ್.

ತೂಗುಯ್ಯಾಲೆ

ಮನದ ತುಂಬ ಕಸಿವಿಸಿಯ ಆರಂಭ….
ಕಣ್ಣಮುಚ್ಚಾಲೆಯಾಡುವ ಮನವೆಂಬ ಸ್ತಂಭ….
ಕನ್ನಡಿಯಲಿ ತೋರುವುದು ಕ್ಷಣಕೊಂದು ಬಿಂಬ…
ಹೂ ಹಾದಿಯೆಂದು ಕಾಲಿಟ್ಟೂಡನೆ ಎದುರಾಗುವುದೊಂದು ಮುಳ್ಳಿನ ಕಂಬ….
ಬದುಕೇ ಮರ್ಕಟ ಆಟದ ಪ್ರತಿಬಿಂಬ….
ಕಲ್ಪ. ಸಿ.ಎನ್

Sachin Tendulkar

ನೀನೂಬ್ಬ ಮಹಾನ್ ಆಟಗಾರ..‌

ದೇಶದ ಕೀರ್ತಿ ಪತಾಕೆಯ ಹಾರಿಸಿದೆ ಎತ್ತರ..‌

ನಿನ್ನ ಕಂಗಳಲ್ಲಿ ಏನೋ ಹೂಳಪು…

ಮೈದಾನದ ತುಂಬಾ ನೀನಟ್ಟಿದ ಚಂಡಿನದೆ ಛಳಕು…

ಹೇಗೆ ವರ್ಣಿಸಲಿ ನಿನ್ನಾಟವ…

ಕದಲಿಸಲಾರರು ನಿನ್ನಿಂದ ಕಣ್ಣೋಟವ…

ಸಕಲ ಐಶ್ವರ್ಯ ತುಂಬಿವೆ ನಿನ್ನಲ್ಲಿ…

ಆದರೂ ಮಾನವೀಯತೆಯ ಛಳಕು ನಿನ್ನ ಕಣ್ಣಲ್ಲಿ…

ದೇಶಕ್ಕಾಗಿ ಮುಡಿಪು ಈ ಆಟ ಎಂಬ ತೃಪ್ತಿ ಮನದಲ್ಲಿ…

ಹೇಗೆ ವಂದಿಸಲಿ ಈ ಪುಟ್ಟ ಮೂರ್ತಿಯ ಕೀರ್ತಿಗೆ…

ಬೆಳಗುತ್ತಿರಲಿ ಸದಾ ನಿನ್ನ ಪ್ರಕಾಶ ವಿಶ್ವದಲ್ಲಿ…

ಮೂಡಿಸುತಿರು ಮಂದಹಾಸ ಎಲ್ಲರ ಮೊಗದಲ್ಲಿ..‌.

ನಿನ್ನಾಟದ ರಂಗಿನಿಂದ ಭಾರತದಲ್ಲಿ ಸದಾ ದೀಪಾವಳಿ…

ತುಂಬಿರುವೆ ಎಲ್ಲರ ಮನ ಬಣ್ಣದ ರಂಗೋಲಿಯಲ್ಲಿ…

ನಗು ನಗುತ್ತಾ ನೀ ಇರು ನೂರು ಕಾಲ ನಮ್ಮೆಲ್ಲರ ಜೂತೆಯಲ್ಲಿ…

ಓ ಮಹಾನ್ ಚೇತನ…

ನಿನಗಿದೋ ನನ್ನ ಸಾವಿರ ಸಾವಿರ ನಮನ…

-ಕಲ್ಪ. ಸಿ.ಎನ್.

ನಮ್ಮ ಹಳ್ಳಿ ಮನೆ

ಪ್ರಕೃತಿಯ ಸುಂದರ ಮಡಿಲು ಈ ನೆಲ…

ಸ್ಫಟಿಕದಂತೆ ಶುಧ್ಧ ಸಂಜೀವಿನಿ ಇಲ್ಲಿಯ ಜಲ…

ಈ ರಮಣೀಯ ತಾಣದಲ್ಲಿ ದೇವ ಸೃಷ್ಟಿಸಿದ ನಂದಗೋಕುಲ….

ಉದಯಿಸಿತಿಲೊಂದು ಸುಸಂಕೃತ ಕುಲ…

ಈ ಚಂದದ ಮನೆಯ ಒಡೆಯರು ನಾವೆಲ್ಲ…

ನಮ್ಮಲಿರುವುದು ಒಗ್ಗಟ್ಟಿನ ಬಲ…

ನನ್ನ ಮುದ್ದು ಮನೆ ಹೀಗೆ ಇರಲಿ ಚಿರಕಾಲ…

ಸದಾ ತುಂಬಿರಲಿ ನಗುವಿನ ಕಿಲ ಕಿಲ…

– ಕಲ್ಪ. ಸಿ.ಎನ್.

ಹನಿ ಹನಿಯಾಗಿ ಧರೆಗಿಳಿಯುವ  ವೈಯ್ಯಾರವೇ ಚಂದ…

ನಿನ್ನ ಸಂಗೀತಕ್ಕೆ ತಲೆದೂಗುವ ಪ್ರಕೃತಿಯೇ ಅಂದ….

ಮರ ಗಿಡಗಳಿಗೂ ಹೊಸ ಹಸಿರು ಉಡುಗೆಯುಡುವ ಆನಂದ…

ಜುಳು ಜುಳು ಧುಮುಕುವ ಜಲಪಾತದ ನಿನಾದ…

ಕೃಷಿಕರಿಗೆಲ್ಲ ಹೊಸ ಬೆಳೆಯ ಉನ್ಮಾದ… ನೋಡುವುದೇನು ನಿನ್ನ ಅಮೋದ ಪ್ರಮೋದ…

ವರ್ಷದಾರೆಯೇ, ನಿನಗೀದೋ ನಮ್ಮೆಲ್ಲರ ಅನಂತ ನಮನ….

 

ಕಲ್ಪ. ಸಿ.ಎನ್.